Posts

Showing posts from June, 2026

ಮೆಲುಕು - ೪

  ೩೧. ಆಸೆ ಯಾರಿಗೆ ಇರೋದಿಲ್ಲ ತಾನೇ ಆಸೆ ನಮ್ಮ ಜನರಿಗೆ ತುಂಬಿ ತುಳುಕುತಿದೆ ಅತಿ ಅಸೆ ಸೋತರೂ ಅತಿ ಆಸೆ, ಬರಲೇಬೇಕಲ್ಲ ದುರಾಸೆ ಅಸೆ ಉತ್ತಮ ಸ್ಥಾನ ಗೈದರೆ ಸಿಗುವುದು ಪ್ರಶಂಸೆ *** ೩೨. ದೇವಸ್ಥಾನ ಒಳ್ಳೆಯದಾಗಬೇಕೆಂದರೆ ಮಾಡಿಸಬೇಕು ಅರ್ಚನೆ ಕೊಡಲೇಬೇಕಲ್ಲ ಪೂಜಾರಿಗೆ ದಕ್ಷಿಣೆ ದೇವಸ್ಥಾನಕ್ಕೆ ಹೋದರೆ, ಹಾಕದೆ ಬರುತ್ತೀರಾ ಪ್ರದಕ್ಷಿಣೆ ನಿಮಗೆ ಆಶೀರ್ವದಿಸಿ ದೇವರು ನೀಡುವನು ರಕ್ಷಣೆ *** ೩೩. ಬ್ರಿಲಿಯಂಟ್ಸ್ಗಳು ಔಟ್ ಆಫ್ ಔಟ್ ತೆಗೆದು ಓದುವರೆ ಪಂಟರು ಇವರ ಮುಂದೆ ನಾವು ಯಾವಾಗಲೂ ಕುಂಟರು ಅಕ್ಕಿ ರಾಗಿ ಬೆಳೆಯುವರೆಲ್ಲ ಪೆದ್ದರು ಇದನ್ನು ತಿನ್ತಾರೆ ಪಂಟರು, ಅವರಾಗಲ್ವಾ ಪೆದ್ದರು? ಯೋಚಿಸು ಗುರು. *** ೩೪. ರೈತ ನಿನಗೆ ಬರಲ್ಲ ಅಂದ್ರು ಎ,ಬಿ,ಸಿ,ಡಿ ನೀನೇ ಸರ್ಕಾರಕ್ಕೆ ಕೊಟ್ಟೆ ಸಬ್ಸಿಡಿ ನಿನ್ನ ಬೆಳೆಯಲ್ಲಿ ಕೊಡಲಿಲ್ಲ ಅಂದ್ರೆ ಒಂದು ಹಿಡಿ ರೈತ ನಿಲ್ಲದ ದೇಶದ ಆಸೆ ಬಿಟ್ಟು ಬಿಡಿ *** ೩೫. ಯಶಸ್ಸು ಉತ್ತಮ ಕೆಲಸ ಮಾಡಿದರೆ ಸಿಗುವುದು ಯಶಸ್ಸು ಆವಾಗಲೇ ಆ ಕೆಲಸ ಫುಲ್ ಸಕ್ಸಸ್ಸು ಕೆಲಸ ಕೆಟ್ಟರೆ ಆಗುವುದು ಅಪಯಶಸ್ಸು ಕೆಲಸದಲ್ಲಿ ಯಶಸ್ ಕಂಡಾಗ ಜೀವನದಲ್ಲಿ ಚಿಮ್ಮುವುದು ಉಮ್ಮಸ್ಸು *** ೩೬. ಗಿರವಿ ಅಂಗಡಿ ಗೀರ ಗಿರವಿ ಅಂಗಡಿ ಗೀರ ನೀ ಯಾಕೆ ಮುಟ್ಟುಸ್ತೀಯ ಜನರಿಗೆ ಬಡತನದ ಖಾರ ಒಂದ್ ಕಿಟ ಅವರೋದ್ರೇ ಬಾನೆತ್ತರ ಅವರಿಂದ ನೀನಾಗುವೆ ಸಂಹಾರ *** ೩೭. ವಿದ್ಯೆ ವಿದ್ಯಾದಾನವೇ ಮಹಾದಾನ ಅಂದಾಗಿತ್ತು ಧನಮ್ ಯಚ್ಛೇನ ವಿದ್ಯಮ್ ಇಂದಾಗಿದೆ ಆದರೆ ಇದ...