ಹಾಗೆ ಬರೆದದ್ದು - ೨
ಈ ಹೃದಯಕ್ಕೆ ಅವಳು ಬರೆದಳು ಪತ್ರ. ಆದರೆ ಹೇಳದೆ ಹೋದಳು ಅವಳ ಪಾತ್ರ. *** ಮನ ಕುಲುಕಿತು ಅವಳ ಮೊಗವ ನೋಡಿ, ಮನದಲ್ಲಿ ಮಾಡಿ ಹೋದಳು ಮೋಡಿ. *** ಮಾರಾಟಕ್ಕಿದೆ ಈ ನನ್ನ ಹೃದಯ. ಏಕೆಂದರೆ ಈ ಜೀವನದಲ್ಲಿ ಅವಳೇ ಮಾಯ. ತೆರೆಯಲು ಬಾ ನೀನೂಂದು ಹೊಸ ಅಧ್ಯಾಯ. ನೀ ಜೊತೆಗಿದ್ದರೆ ತಿಳಿಯೋದಿಲ್ಲ ಹೇಗೆ ಕಳೆಯುತ್ತೆ ಸಮಯ. *** ಕಾದು ಕುಳಿತಿರುವೆ ನಾ ನನ್ನ ನಲ್ಲೆಗೆ. ಮೆಲುಕು ಹಾಕುತ್ತಾ ಅವಳ ಕಿರು ನಗೆ. ಕೈಯಲ್ಲಿ ಗುಲಾಬಿಯ ಹಿಡಿದು, ಮನದಲ್ಲಿ ಆಕೆಯ ನೆನೆದು *** ನನ್ನ ಕನಸೊಂದು ಹೇಳುವೆ ಕೇಳು ನೀನು ನನ್ನ ಕನಸೇ ನೀನಾದರೇ ಹೇಳುವುದು ಇನ್ನೇನು ***