ಮೆಲುಕು - ೧
೧. ನಮಸ್ಕಾರ ಚುಟುಕು ಬರೆಯುವುದಕ್ಕೆ ನೀಡಿದ್ದೀರಾ ಸಹಕಾರ ನಾನಾಡಿದ್ದೇನೆ ಪದ ವಾಕ್ಯಗಳ ನಡುವೆ ಸಂಚಾರ ಈ ಚುಟುಕುಗಳಲ್ಲಿದೆ ಒಂದುಚೂರು ವಿಚಾರ ನನ್ನ ಪ್ರೀತಿಯ ಚುಟುಕು ಬಾಂದವರಿಗೆಲ್ಲ ನಮಸ್ಕಾರ *** ೨. ಹಠದ ಆಟ ಜೀವನ ಒಂದು ಆಟ ಅದನ್ನು ಗೆಲ್ಲಲೇಬೇಕೆಂಬ ಚಟ ಗೆದ್ದವನು ಕಲಿಯುವನು ಪಾಠ ಗೆಲ್ಲಲಾರದವನು ಪಡುವನು ಸಂಕಟ *** ೩. ಮಲೆನಾಡು ಮಲೆಗಳ ನಾಡು ಮನತಣಿಸುವ ಬೀಡು ಎಲ್ಲೆಲ್ಲೂ ಸಹ್ಯಾದ್ರಿಯ ಗೂಡು ತೊಲಗಿಸುವುದು ಮನಸ್ಸಿನ ಕೇಡು *** ೪. ಮಳೆ ನಮ್ಮೊರಲ್ಲಿ ಬರುತ್ತೆ ಜಡಿಮಳೆ ಮಳೆ ಒದ್ದೆ ಮಾಡಿತು ಈ ಇಳೆ ತೊಲಗಿಸಿತು ರೈತನ ಗೋಳಿನ ಕೊಳೆ ಆಮೇಲೆ ಬಂತು ಬಂಗಾರದ ಬೆಳೆ *** ೫. ವೈಶಿಷ್ಟ್ಯ ಬೊಗಸೆಯಲ್ಲಿ ಹರಳಿದ ಪ್ರೀತಿ ಚಂದ ಗಂಧವನ್ನ ಸವಿದರೆ ಪರಮಾನಂದ ದುಂಭಿ ಹೂವಲ್ಲಿ ಹೀರುವುದು ಮಕರಂದ ಆದರೆ ತಾವರೆ ಕೆಸರಿನಲ್ಲಿಯೇ ಹರಳುವುದು ಚಂದ *** ೬. ಆಕೆ ಅವಳದು ಸಂಪಿಗೆಯಂತಹ ಸ್ಮೈಲು ಅದಕ್ಕೆ ನಾನಾದೆ ಐಲು ಪೈಲು ಅಂದದಲ್ಲಿ ರಂಭೆಗಿಂತಲೂ ಮೇಲು ಇವಳ ಮುಂದೆ ನಾ ಒಪ್ಪಿ ಕೊಳ್ಳಲೇಬೇಕಿತ್ತು ಸೋಲು *** ೭. ಮದುವೆ ಸಪ್ತಾರ್ಷಿಗಳ ಆಶೀರ್ವಾದದಿಂದ ಅಗ್ನಿಸಾಕ್ಷಿಯ ಮುಂದೆ ಸಪ್ತಪದಿ ತುಳಿದು ಬ್ರಹ್ಮಗಂಟನು ಬಿಗಿದು ಅರುಂಧತಿ ನಕ್ಷತ್ರವನ್ನು ನೋಡಿ ಹಿರಿಯರ ಆಶೀರ್ವಾದಿಂದಾಗುವುದೇ ಮದುವೆ *** ೮. ಸಾಹಿತ್ಯ ಬರೆದೆ ನಾನು ಚುಟುಕು ಸಾಹಿತ್ಯ ನೀಡಿತು ನನ್ನ ಬದುಕಿಗೆ ಲಾಲಿತ್ಯ ಗೀಚಿದೆ ಅದನ್ನು ನಾನು ನಿತ್ಯ ನಿತ್ಯ ಇದೆ ತಾನೆ ನನ್ನ ಬದುಕಿಗೆ ಅಗತ್ಯ *** ೯....