Posts

Showing posts from February, 2026

ಮೆಲುಕು - ೩

  ೨೧. ನನಗಿದು ಕನ್ಫ್ಯೂಷನ್ ಮಾರ್ಕ್ಸ್ ಇಲ್ಲದಿದ್ದರೆ ಕೊಡಲೇಬೇಕು ಡೊನೇಷನ್ ವಯಸ್ಕರಿಗೆ ಬೇಕೇ ಬೇಕಲ್ಲ ಕಾನ್ಸೆಷನ್ ರಾಜಕಾರಣಿಗಳಲ್ಲಿ ಏಕೆ ಆಗುತ್ತಿದೆ ಮ್ಯುಟೇಷನ್ ನನಗಿದು ತುಂಬಾ ಕನ್ಫ್ಯೂಷನ್ ಕನ್ಫ್ಯೂಷನ್ *** ೨೨. ಹೆಂಡತಿ ಜೀವನದ ನಡೆನುಡಿಗಳನ್ನು ಅರ್ಥಮಾಡಿಕೊಳ್ಳುತ್ತ ಗಂಡನ ಕಷ್ಟ ನೋವುಗಳನ್ನು ಹಣ್ಣಿನಂತೆ ಸವಿಯುತ್ತ ಬಾಳಿನ ದೀಪವನ್ನು ಕತ್ತಲಿನಿಂದ ಬೆಳಕಿಗೆ ಸ್ಪರ್ಶಿಸುತ್ತಾ ಗಂಡನ ಜೀವನದ ಸಂಗಾತಿಯಾಗಿರುವಳೆ ಹೆಂಡತಿ *** ೨೩. ನಾನು ಭಾರತೀಯ ನಾನು ಭಾರತೀಯ ಅನ್ನೋದಕ್ಕೆ ಆಧಾರ್ ಕಾರ್ಡು ಬಡವ ಶ್ರೀಮಂತ ಅನ್ನೋದಕ್ಕೆ ಬಿಪಿಎಲ್, ಎಪಿಎಲ್ ಕಾರ್ಡು ಉದ್ಯಮಿ ಅನ್ನೋದಕ್ಕೆ ಜಾಬ್ ಕಾರ್ಡು ನಾ ಮನುಷ್ಯ ಅನ್ನೋದಕ್ಕೆ ಯಾವ ಕಾರ್ಡು ? *** ೨೪. ಪ್ರೀತಿ  ಪ್ರೀತಿಲಿ ಬಿದ್ದವನು ಹೇಳ್ಕೊತಾನೆ ಜಾಕಿ ಪ್ರೀತಿ ಸಿಗಲಿಲ್ಲ ಅಂದರೆ ಅವನು ತಿರುಬೋಕಿ ನೀನು ಬೇಡ ಅಂತ ಬರೆದು ಕೊಟ್ಟಳು ಸೈನ್ ಹಾಕಿ ಇನ್ನೇನು ಉಳಿದಿದೆ ಅವನ ಜೀವನದಲ್ಲಿ ಬಾಕಿ? *** ೨೫. ಪ್ರೀತಿ ಒಂತರ ಗಿನತಿ ಒಂದು ಎರಡು ಹುಡುಗಿ ಇಂದೇ ಹೊರಡು ಮೂರು ನಾಲ್ಕು ಕಾಲು ಹಾಕು; ಐದು ಆರು ಪ್ರಿಯತಮನ ಹಾರ್ಟು ಶೇರು ಏಳು ಎಂಟು ಯಾವಾಗ ನೋಡಿದರು ಮೀಟು ಒಂಬತ್ತು ಹತ್ತು ನಿನ್ಮೇಲೇ ಪ್ಯಾರ್ ಆಯ್ತು *** ೨೬. ಅಂದು-ಇಂದು ಅಂದಿನ ಅಮ್ಮ ಇಂದಿನ ಮಮ್ಮಿ ಅಂದಿನ ಅಪ್ಪ ಇಂದಿನ ಡ್ಯಾಡಿ ಅಂದಿನ ಸಾಧನೆ ಇಂದಿನ ಸಾಮಾನ್ಯ ಜ್ಞಾನ ಅಂದಿನ ಸಂಸ್ಕೃತಿ ಸಂಸ್ಕಾರ ಇಂದು ಏನು ಏನು...? *** ೨೭. ಕಾಲೇಜಿನ...