ಹಾಗೆ ಬರೆದದ್ದು - ೨
ಈ ಹೃದಯಕ್ಕೆ
ಅವಳು ಬರೆದಳು ಪತ್ರ.
ಆದರೆ ಹೇಳದೆ
ಹೋದಳು ಅವಳ ಪಾತ್ರ.
***
ಮನ ಕುಲುಕಿತು ಅವಳ ಮೊಗವ ನೋಡಿ,
ಮನದಲ್ಲಿ ಮಾಡಿ ಹೋದಳು ಮೋಡಿ.
***
ಮಾರಾಟಕ್ಕಿದೆ ಈ ನನ್ನ ಹೃದಯ.
ಏಕೆಂದರೆ ಈ ಜೀವನದಲ್ಲಿ ಅವಳೇ ಮಾಯ.
ತೆರೆಯಲು ಬಾ ನೀನೂಂದು ಹೊಸ ಅಧ್ಯಾಯ.
ನೀ ಜೊತೆಗಿದ್ದರೆ ತಿಳಿಯೋದಿಲ್ಲ
ಹೇಗೆ ಕಳೆಯುತ್ತೆ ಸಮಯ.
***
ಕಾದು ಕುಳಿತಿರುವೆ
ನಾ ನನ್ನ ನಲ್ಲೆಗೆ.
ಮೆಲುಕು ಹಾಕುತ್ತಾ
ಅವಳ ಕಿರು ನಗೆ.
ಕೈಯಲ್ಲಿ ಗುಲಾಬಿಯ ಹಿಡಿದು,
ಮನದಲ್ಲಿ ಆಕೆಯ ನೆನೆದು
***
ನನ್ನ ಕನಸೊಂದು ಹೇಳುವೆ
ಕೇಳು ನೀನು
ನನ್ನ ಕನಸೇ ನೀನಾದರೇ
ಹೇಳುವುದು ಇನ್ನೇನು
***
Comments
Post a Comment