ಹಾಗೆ ಬರೆದದ್ದು - ೧

ಪ್ರೀತಿನ ಸುಳ್ಳು ಅಂತ ಹೇಳ್ತಾರೆ.

ಪ್ರೀತಿನ ನಿಜ ಅಂತ ಹೇಳ್ತಾರೆ.

ನಿಜವಾದ ಪ್ರೀತಿ ಸುಳ್ಳಲ್ಲ.

ಸುಳ್ಳಿನ ಪ್ರೀತಿ ನಿಜವಲ್ಲ.

ಆದರೆ ಈ ಪ್ರೀತಿನೆ ಹಾಗೆ,

ನಿಜವಾಗಿರೋದನ್ನ ಸುಳ್ಳು ಅಂತ ತೋರಿಸುತ್ತೆ.

ಸುಳ್ಳಾಗಿರೋದನ್ನ ನಿಜ ಅಂತ ತೋರಿಸುತ್ತೆ.


***


ಪ್ರೇರಿತ ಗೊಂಡೆಯ

ನನ್ನ ಪದ್ಯಗಳ ಓದಿ.

ಓದುಗರ ಮನಸ್ಸು ಗೆದ್ದರೆ

ಅದೇ ನನಗೆ ನೆಮ್ಮದಿ.


***


ನೊಂದ ಮನಕ್ಕೆ

ನೀ ಅಚ್ಚದೆ ಹೋದೆ ಮುಲಾಮು?

ಆದರೂ ಹೋಗುವ

ಮುನ್ನ ನೀ ಹೇಳಬಹುದಿತ್ತಲ್ಟಾ ಸಲಾಮು.


***


ಈಗೆ ಬಂದು ಹಾಗೆ

ಹೋದಳು ನನ್ನಾಕೆ.

ಯಾಕೋ ಹೇಳಲಿಲ್ಲ

ನನಗೆ ಅವಳು ಓಕೆ.


***


ಪ್ರೀತಿ ಇಲ್ಲದ ಊರಿನಲ್ಲಿ

ನಿನ್ನ ಹುಡುಕಿ ಬಂದವನು ನಾನು.

ನಿನ್ನ ಸೆರಗ ಸೋಕಿಸಿ

ಮೆಲ್ಲಗೆ ಹೃದಯ ಕದ್ದವಳು ನೀನು.


***

Comments

Popular posts from this blog

Ageing is not an end

Thank You

My Mother