ಪದ್ಯಗಳು - ೨
ತಾಯಿ
ಕಣ್ತೆರೆದಾಗ ಈ ಜಗದಲ್ಲಿ ಮೊದಲು ಕಂಡದ್ದು ನೀನೆ.
ಅ ಅ ಇ ಈ ಹೇಳಿಕೊಟ್ಟವಳು ಮೊದಲು ನೀನೆ ತಾನೇ...??
ಹಸಿವು ಎಂದು ಕಿರುಚಿದ್ದಾಗ ಕುಡಿಸಿದೆ ಎದೆಯ ಹಾಲು.
ನಿನ್ನ ಪ್ರೀತಿ ಸೂರ್ಯ ಆಕಾಶಕ್ಕಿಂತಲೂ ಮಿಗಿಲು.
***
ನೆನಪಿದೆಯಾ
ನೆನಪಿದೆಯಾ ನಾ ನಿನ್ನ ನೋಡಿದ ಮೊದಲ ದಿನ.
ನಿನ್ನ ಸೌಂದರ್ಯಕ್ಕೆ ನಾಚಿಕೊಂಡಿತ್ತು ಈ ಮನ.
ಕೇಳುತ್ತಿಲ್ಲ ಯಾಕೋ ಈ ಹೃದಯ ನನ್ನದೇ ಮಾತುಗಳನ್ನ.
ನೀ ಎದುರು ಬಂದು ನಿಂತರೆ ಮಾತು ಬರದೇ ನಾ ಮೌನ.
***
ಹೋಳಿ
ಮನವಿದು ಬಣ್ಣದ ಓಕುಳಿ.
ಓಕುಳಿಯಲ್ಲಿ ಬಣ್ಣಗಳದೇ ಹಾವಳಿ.
ತಂಪಿರಿಸಿ ಕರೆಯುತಿದೆ ನನ್ನ ಗಾಳಿ.
ಬಣ್ಣದ ಕನಸುಗಳಿಗೆ ಲಾಂಛನವೇ
ಈ ಹೋಳಿ...
***
ಆಕೆ
ನಿನ್ನ ಮೊಗಕೆ ಯಾವಾಗಲೋ ಮನಸೋತೆ,
ನಿನ್ನ ನೋಡುತ ನನ್ನಾನೇ ಮೈಮರೆತೆ.
ನೀ ನನ್ನವಳಾಗುವೆಯ ಎಂಬ ಚಿಂತೆ,
ನಿನ್ನ ನೋಡಿ ಮೂಡಿ ಬಂತು ಈ ಕವಿತೆ.
***
ಮಾತಾಡೋಣ ಬಾ
ಮಾತಾಡೋಣ ಬಾ
ಮಾತಾಡೋಣ ಬಾ,
ನಮ್ಮ ಕಷ್ಟವನ್ನೆಲ್ಲ
ಕಟ್ಟಿಟ್ಟು.
ಮಾತಾಡು ನೀ ನನ್ನ
ಜೊತೆಗೆ ನಿನ್ನ ಮಾನಸ
ಬಿಚ್ಚಿಟ್ಟು.
ಮಾತಿನಲ್ಲಿ ಬೇಡ
ನನ್ನ ನಿನ್ನ ಮಧ್ಯ
ನಡುವೆ ಗುಟ್ಟು.
ಮಾತಿನ ಜೊತೆಗೆ ನಗುತ
ಮಾಡು ನಿನ್ನ ಕಷ್ಟಗಳ
ರಟ್ಟು.
ಮಾತನಾಡುತ್ತ ಇದ್ದರೆ
ನಮ್ಮ ಜೀವನ ಎಷ್ಟು
***
Comments
Post a Comment