ಪದ್ಯಗಳು - ೧
ನಿಮ್ಮೆಲ್ಲರ ಪ್ರೀತಿ ಸಹಕಾರಕ್ಕೆ ಯಾವಾಗಲೂ ಮನಸೋತೆ.
ನಿಮ್ಮೊಂದಿಗೆ ಒಬ್ಬನಾಗಿ ನಾನು ಕೂಡ ಬೆರೆತೆ.
ಭಾವನೆಗಳಿಂದ ಮೂಡಿ ಬಂದಿದೆ ಹಲವಾರು ಕವಿತೆ.
ಕವಿತೆ ಓದುವ ಮುನ್ನ ನನ್ನದೊಂದು ಪುಟ್ಟ ನಮಸ್ತೆ.
***
ಓ ದುಂಡು ಮಲ್ಲಿಗೆ,
ಪರಿಮಳ ಸೂಸುವೆ ನೀ ಮೆಲ್ಲಗೆ.
ಹೆಣ್ಣುಮಕ್ಕಳ ಮುಡಿಯಲ್ಲಿ
ನೀ ಚೆಂದವಾಗಿ ನಗುವೆ.
ನಿನ್ನ ಘಮ ಪಸರಿಸಿ ಆನಂದ
ನೀಡುವೆ ಎಲ್ಲರ ಮನಸಿಗೆ.
ಸುಗಂಧದಲ್ಲಿ ಮೀರಿಸಲಾರರು,
ನಿನ್ನ ಮೆಚ್ಚುಗೆ.
ಓ ದುಂಡು ಮಲ್ಲಿಗೆ ....
ನೀ ಬೇಕು ಸೃಷ್ಟಿಗೆ,
ಏಕೆಂದರೆ ನೀ ಮೂಡಿಸಿರುವ
ಛಾಪು ಹಾಗೆ.
***
ಕೊಡಗು
ಪ್ರಕೃತಿಯ ಪ್ರಯೋಗಾಲಯ ಕೊಡಗು,
ಮೂಡಿಸಿದೆ ಎಲ್ಲರಿಗೂ ಹಸಿರಿನ ಬೆರಗು.
ಎಲ್ಲಿ ಕೇಳಿದರೂ ಹಕ್ಕಿಯ ಕಲರವದ ಕೂಗು,
ಹಾಗೆ ಹೋಗಲಾಡಿಸುವುದು ಮನದ ಕೊರಗು.
***
ನನ್ನ ಹೃದಯ
ಮಾರಾಟಕ್ಕಿದೆ ನನ್ನ ಹೃದಯ,
ಏಕೆಂದರೆ ಈ ಜೀವನದಲ್ಲಿ ಅವಳೇ ಮಾಯಾ.
ತೆರೆಯಲು ಬಾ ನೀನೊಂದು ಹೊಸ ಅಧ್ಯಾಯ,
ನನ್ನ ಜೊತೆಗಿದ್ದರೆ ನೀನು ತಿಳಿಯೋದಿಲ್ಲ
ಹೇಗೆ ಕಳೆಯುತ್ತೆ ಸಮಯ.
***
ಕೇಳು
ಸೌಂದರ್ಯಕ್ಕೆ ಮನಸೋತವನ ಕವನ ಕೇಳು,
ಏಕೆಂದರೆ ಇವನದು ಆ ಲೋಕದಲ್ಲೇ ಬಾಳು.
ಕೆಣಕುತಿದೆ ನನ್ನನ್ನು ಆ ನಿನ್ನ ಚಂದದ ಮುಂಗುರುಳು,
ಅಂದ ನೋಡಿ ಹೊರಡುತ್ತಿಲ್ಲ ಬರಿಯೋಕೆ ಪದಗಳು.
***
Comments
Post a Comment