Kannada - ಪದ್ಯಗಳು

ನಮಸ್ತೆ

ನಿಮ್ಮೆಲ್ಲರ ಪ್ರೀತಿ ಸಹಕಾರಕ್ಕೆ ಯಾವಾಗಲೂ ಮನಸೋತೆ

ನಿಮ್ಮೊಂದಿಗೆ ಒಬ್ಬನಾಗಿ ನಾನು ಕೂಡ ಬೆರೆತೆ

ಭಾವನೆಗಳಿಂದ ಮೂಡಿ ಬಂದಿದೆ ಹಲವಾರು ಕವಿತೆ

ಕವಿತೆ ಓದುವ ಮುನ್ನ ನನ್ನದೊಂದು ಪುಟ್ಟ ನಮಸ್ತೆ.


***


ಮಲ್ಲಿಗೆ

ದುಂಡು ಮಲ್ಲಿಗೆ

ಪರಿಮಳ ಸೂಸುವೆ ನೀ ಮೆಲ್ಲಗೆ

ಹೆಣ್ಣುಮಕ್ಕಳ ಮುಡಿಯಲ್ಲಿ 

ನೀ ಚೆಂದವಾಗಿ ನಗುವೆ

ನಿನ್ನ ಘಮ ಪಸರಿಸಿ ಆನಂದ 

ನೀಡುವೆ ಎಲ್ಲರ ಮನಸಿಗೆ

ಸುಗಂಧದಲ್ಲಿ ಮೀರಿಸಲಾರರು

ನಿನ್ನ ಮೆಚ್ಚುಗೆ

ದುಂಡು ಮಲ್ಲಿಗೆ .... 

ನೀ ಬೇಕು ಸೃಷ್ಟಿಗೆ

ಏಕೆಂದರೆ ನೀ ಮೂಡಿಸಿರುವ 

ಛಾಪು ಹಾಗೆ.

 

***


ಕೊಡಗು 

ಪ್ರಕೃತಿಯ ಪ್ರಯೋಗಾಲಯ ಕೊಡಗು

ಮೂಡಿಸಿದೆ ಎಲ್ಲರಿಗೂ ಹಸಿರಿನ ಬೆರಗು

ಎಲ್ಲಿ ಕೇಳಿದರೂ ಹಕ್ಕಿಯ ಕಲರವದ ಕೂಗು

ಹಾಗೆ ಹೋಗಲಾಡಿಸುವುದು ಮನದ ಕೊರಗು.


***


ನನ್ನ ಹೃದಯ 

ಮಾರಾಟಕ್ಕಿದೆ ನನ್ನ ಹೃದಯ

ಏಕೆಂದರೆ ಜೀವನದಲ್ಲಿ ಅವಳೇ ಮಾಯಾ

ತೆರೆಯಲು ಬಾ ನೀನೊಂದು ಹೊಸ ಅಧ್ಯಾಯ

ನನ್ನ ಜೊತೆಗಿದ್ದರೆ ನೀನು ತಿಳಿಯೋದಿಲ್ಲ 

ಹೇಗೆ ಕಳೆಯುತ್ತೆ ಸಮಯ.

 

***


ಕೇಳು

ಸೌಂದರ್ಯಕ್ಕೆ ಮನಸೋತವನ ಕವನ ಕೇಳು

ಏಕೆಂದರೆ ಇವನದು ಲೋಕದಲ್ಲೇ ಬಾಳು

ಕೆಣಕುತಿದೆ ನನ್ನನ್ನು ನಿನ್ನ ಚಂದದ ಮುಂಗುರುಳು

ಅಂದ ನೋಡಿ ಹೊರಡುತ್ತಿಲ್ಲ ಬರಿಯೋಕೆ ಪದಗಳು.

 

***


ತಾಯಿ

ಕಣ್ತೆರೆದಾಗ ಜಗದಲ್ಲಿ ಮೊದಲು ಕಂಡದ್ದು ನೀನೆ

ಹೇಳಿಕೊಟ್ಟವಳು ಮೊದಲು ನೀನೆ ತಾನೇ...?? 

ಹಸಿವು ಎಂದು ಕಿರುಚಿದ್ದಾಗ ಕುಡಿಸಿದೆ ಎದೆಯ ಹಾಲು

ನಿನ್ನ ಪ್ರೀತಿ ಸೂರ್ಯ ಆಕಾಶಕ್ಕಿಂತಲೂ ಮಿಗಿಲು.

 

***


ನೆನಪಿದೆಯಾ

ನೆನಪಿದೆಯಾ ನಾ ನಿನ್ನ ನೋಡಿದ ಮೊದಲ ದಿನ

ನಿನ್ನ ಸೌಂದರ್ಯಕ್ಕೆ ನಾಚಿಕೊಂಡಿತ್ತು ಮನ

ಕೇಳುತ್ತಿಲ್ಲ ಯಾಕೋ ಹೃದಯ ನನ್ನದೇ ಮಾತುಗಳನ್ನ

ನೀ ಎದುರು ಬಂದು ನಿಂತರೆ ಮಾತು ಬರದೇ ನಾ ಮೌನ.

 

***


ಹೋಳಿ 

ಮನವಿದು ಬಣ್ಣದ ಓಕುಳಿ

ಓಕುಳಿಯಲ್ಲಿ ಬಣ್ಣಗಳದೇ ಹಾವಳಿ

ತಂಪಿರಿಸಿ ಕರೆಯುತಿದೆ ನನ್ನ ಗಾಳಿ

ಬಣ್ಣದ ಕನಸುಗಳಿಗೆ ಲಾಂಛನವೇ 
ಹೋಳಿ...

 

***


ಆಕೆ

ನಿನ್ನ ಮೊಗಕೆ ಯಾವಾಗಲೋ ಮನಸೋತೆ

ನಿನ್ನ ನೋಡುತ ನನ್ನಾನೇ ಮೈಮರೆತೆ

ನೀ ನನ್ನವಳಾಗುವೆಯ ಎಂಬ ಚಿಂತೆ

ನಿನ್ನ ನೋಡಿ ಮೂಡಿ ಬಂತು ಕವಿತೆ.


***


ಮಾತಾಡೋಣ ಬಾ

ಮಾತಾಡೋಣ ಬಾ

ಮಾತಾಡೋಣ ಬಾ,

ನಮ್ಮ ಕಷ್ಟವನ್ನೆಲ್ಲ

ಕಟ್ಟಿಟ್ಟು.

ಮಾತಾಡು ನೀ ನನ್ನ

ಜೊತೆಗೆ ನಿನ್ನ ಮಾನಸ

ಬಿಚ್ಚಿಟ್ಟು.

ಮಾತಿನಲ್ಲಿ ಬೇಡ

ನನ್ನ ನಿನ್ನ ಮಧ್ಯ

ನಡುವೆ ಗುಟ್ಟು.

ಮಾತಿನ ಜೊತೆಗೆ ನಗುತ

ಮಾಡು ನಿನ್ನ ಕಷ್ಟಗಳ

ರಟ್ಟು.

ಮಾತನಾಡುತ್ತ ಇದ್ದರೆ

ನಮ್ಮ ಜೀವನ ಎಷ್ಟು


***


ನನ್ನವಳು

ಬುಲೆಟ್ ಕೆಟಿಮ್ ಗಾಡಿ ಬೇಕು ಎನ್ನಲಿಲ್ಲ ನನ್ನವಳು,

ರೆಂಟಲ್ ಗಾಡಿಲಿ ಚಾಮುಂಡಿ ಬೆಟ್ಟ ತೋರಿಸು ಅಂದಳು.

 

ಅಂದು ಚೆಂದ ನೋಡಿ ನನ್ನನ್ನು ಪ್ರೀತಿಸಲಿಲ್ಲ ನನ್ನವಳು

ಕಪ್ಪು ಬಿಳುಪು ಲೆಕ್ಕಿಸದೆ ಮನಸ್ಸು ನೋಡಿ ಪ್ರೀತಿಸಿದಳು

 

ದೊಡ್ಡ ಆಸೆಗಳನ್ನು ನನಸು ಮಾಡು ಅಂತ ಹೇಳಲಿಲ್ಲ ನನ್ನವಳು,

ಪುಟ್ಟ ಆಸೆಗಳನ್ನೆ ಈಡೇರಿಸುವಾಗ ಅನುಭವಿಸುತ್ತಾ ಖುಷಿ ಪಟ್ಟಳು.

 

ಕೆಲಸ ಹೋದಾಗ ನೀನೊಬ್ಬ ನಿರುದ್ಯೋಗಿ ಅಂತ ಹೇಳಲಿಲ್ಲ ನನ್ನವಳು,

ಆಕೆಯ ಹಣ ಕೊಟ್ಟು ನನ್ನನ್ನು ರಾಜನಂತೆ ನೋಡಿಕೊಂಡಳು.

 

ಎಲ್ಲರನ್ನೂ ಕಳೆದು ಕೊಂಡಾಗ ಕೈ ಬಿಡಲಿಲ್ಲ ನನ್ನವಳು,

ನಿನ್ನ ಜೊತೆಗೆ ಸದಾ ನಾನಿರುವೆ ದೃಢವಾಗಿ ಹೇಳಿದಳು.


***


ನನ್ನ ಚೆನ್ನಿ

ನೋಡ್ಲಿಕೆ ಎಷ್ಟು ಸಂದಾಗಿದಿಯೇ ನನ್ನ ಚೆನ್ನಿ

ನೋಡ್ತಾ ಇರ್ಬೇಕು ಅನ್ಸುತ್ತೆ ನಿನ್ನ ಕೆಂಪು ಕೆನ್ನಿ

ಹೆಣ್ಣೈಕ್ಳೇ ಹೇಳ್ತಾ ಅವರೇ ನೀನು ಬಾರಿ ಕ್ಯೂಟು

ಪಡ್ಡೇ ಹೈಕ್ಳೇ ಹೇಳ್ತಾ ಅವರೇ ನಿನ್ನ ಚೆನ್ನಿ ಫುಲ್ ಹಾಟು


***

Comments

Popular posts from this blog

Ageing is not an end

My Mother

To My Friend