Kannada - ಮೆಲುಕು

 ೧. ನಮಸ್ಕಾರ

ಚುಟುಕು ಬರೆಯುವುದಕ್ಕೆ ನೀಡಿದ್ದೀರಾ ಸಹಕಾರ

ನಾನಾಡಿದ್ದೇನೆ ಪದ ವಾಕ್ಯಗಳ ನಡುವೆ ಸಂಚಾರ

ಈ ಚುಟುಕುಗಳಲ್ಲಿದೆ ಒಂದುಚೂರು ವಿಚಾರ

ನನ್ನ ಪ್ರೀತಿಯ ಚುಟುಕು ಬಾಂದವರಿಗೆಲ್ಲ ನಮಸ್ಕಾರ


***


೨. ಹಠದ ಆಟ

ಜೀವನ ಒಂದು ಆಟ

ಅದನ್ನು ಗೆಲ್ಲಲೇಬೇಕೆಂಬ ಚಟ

ಗೆದ್ದವನು ಕಲಿಯುವನು ಪಾಠ

ಗೆಲ್ಲಲಾರದವನು ಪಡುವನು ಸಂಕಟ


***


೩. ಮಲೆನಾಡು

ಮಲೆಗಳ ನಾಡು

ಮನತಣಿಸುವ ಬೀಡು

ಎಲ್ಲೆಲ್ಲೂ ಸಹ್ಯಾದ್ರಿಯ ಗೂಡು

ತೊಲಗಿಸುವುದು ಮನಸ್ಸಿನ ಕೇಡು


***


೪. ಮಳೆ

ನಮ್ಮೊರಲ್ಲಿ ಬರುತ್ತೆ ಜಡಿಮಳೆ

ಮಳೆ ಒದ್ದೆ ಮಾಡಿತು ಈ ಇಳೆ

ತೊಲಗಿಸಿತು ರೈತನ ಗೋಳಿನ ಕೊಳೆ

ಆಮೇಲೆ ಬಂತು ಬಂಗಾರದ ಬೆಳೆ


***


೫. ವೈಶಿಷ್ಟ್ಯ

ಬೊಗಸೆಯಲ್ಲಿ ಹರಳಿದ ಪ್ರೀತಿ ಚಂದ

ಗಂಧವನ್ನ ಸವಿದರೆ ಪರಮಾನಂದ

ದುಂಭಿ ಹೂವಲ್ಲಿ ಹೀರುವುದು ಮಕರಂದ

ಆದರೆ ತಾವರೆ ಕೆಸರಿನಲ್ಲಿಯೇ ಹರಳುವುದು ಚಂದ


***


೬. ಆಕೆ

ಅವಳದು ಸಂಪಿಗೆಯಂತಹ ಸ್ಮೈಲು

ಅದಕ್ಕೆ ನಾನಾದೆ ಐಲು ಪೈಲು

ಅಂದದಲ್ಲಿ ರಂಭೆಗಿಂತಲೂ ಮೇಲು

ಇವಳ ಮುಂದೆ ನಾ ಒಪ್ಪಿ ಕೊಳ್ಳಲೇಬೇಕಿತ್ತು ಸೋಲು


***


೭. ಮದುವೆ

ಸಪ್ತಾರ್ಷಿಗಳ ಆಶೀರ್ವಾದದಿಂದ

ಅಗ್ನಿಸಾಕ್ಷಿಯ ಮುಂದೆ ಸಪ್ತಪದಿ ತುಳಿದು

ಬ್ರಹ್ಮಗಂಟನು ಬಿಗಿದು ಅರುಂಧತಿ ನಕ್ಷತ್ರವನ್ನು

ನೋಡಿ ಹಿರಿಯರ ಆಶೀರ್ವಾದಿಂದಾಗುವುದೇ ಮದುವೆ


***


೮. ಸಾಹಿತ್ಯ

ಬರೆದೆ ನಾನು ಚುಟುಕು  ಸಾಹಿತ್ಯ

ನೀಡಿತು ನನ್ನ ಬದುಕಿಗೆ ಲಾಲಿತ್ಯ

ಗೀಚಿದೆ ಅದನ್ನು ನಾನು ನಿತ್ಯ ನಿತ್ಯ

ಇದೆ ತಾನೆ ನನ್ನ ಬದುಕಿಗೆ ಅಗತ್ಯ


***


೯. ಬೆಳೆ

ಕಾಲ ಕಾಲಕ್ಕೆ ಆಗಬೇಕು ಬೆಳೆ

ಸಮಯಕ್ಕೆ ಸರಿಯಾಗಿ ಬೇಡವೇ ಮಳೆ?

ಬೆಳೆ ಬಾರದಿದ್ದರೆ ರೈತನ ಜೀವನ ಗೋಳೆ

ಬೆಳೆ ಬಂದರೆ ಚಿಮ್ಮುವುದು ಹರುಷದ ಹೊಳೆ


***


೧೦. ವೇಗ

ಕಡಿಮೆ ವೇಗ ವಾಹನ

ನಮ್ಮ ಜೀವನ ಪಾವನ

ಭಾರಿ ವೇಗ ವಾಹನ

ನಮ್ಮ ಫೋಟೋ ಪ್ರದರ್ಶನ


***


೧೧. ಮರ

ದೇಶಕ್ಕೆ ಶೋಭೆಯೇ ಈ ಹಸಿರು ಮರ

ಆದರೆ ನಮ್ಮ ಜನರಿಗೆ ಮರ ಬೆಳೆಸುವ ಬರ

ಬೇಡವೇ ಮರ ಬೆಳೆಸುವುದಕ್ಕೆ ಜನರ ಸಹಕಾರ

ಸಹಕಾರ ಇಲ್ಲದಿದ್ದರೆ ನೀನಾಗುವೆ ಸಂಹಾರ


***


೧೨. ಪರಿಸರ

ಪರಿಸರ ಇರುವುದು ಸುತ್ತಾ ಮುತ್ತಾ

ಕೊಡುವುದು ಗಾಳಿ ಅತ್ತಾ ಇತ್ತಾ

ಮಾಲಿನ್ಯ ಪರಿಸರದಲ್ಲಿ ಹೆಚ್ಚುತ್ತಾ ಹೆಚ್ಚುತ್ತಾ

ಆದರೆ ಮನುಷ್ಯನ ಸ್ವಾರ್ಥ ಪರಿಸರದ ಕಡೆಗೆ ನಿಲ್ಲುತ್ತಾ...?


***


೧೩. ನೋವು

ಜೀವನದಲ್ಲಿದೆ ತುಂಬಾ ನೋವು

ನೋವು ಹೋದರೆ ಬರುವುದು ನಲಿವು

ನಲಿವಿನಿಂದಲೇ ಜೀವನದ ಉಲಿವು

ಜೀವನದ ತತ್ವಗಳನ್ನು ಅರಿತುಕೊಳ್ಳಬೇಕು ಹಲವು


***


೧೪. ನಿಘಂಟು

ಎರಡು ಮನಸ್ಸು ಕೂಡಿದರೆ ಪ್ರೀತಿ

ಇಬ್ಬರ ಜಾತಕ ಒಂದಿಕೆಯಾದರೆ ತಾನೆ ಮದುವೆ?

ಹಿಂದು,ಮುಸ್ಲಿಂ,ಕ್ರೈಸ್ತ ಆಗೋದಿಲ್ಲ ಒಂದೇ

ಈಡೀ ಜಗತ್ತು ಒಂದಾಗಿದ್ದಾರೆ ಹೇಗಿರುತ್ತೆ, ಯೋಚಿಸು ಒಮ್ಮೆ...


***


೧೫. ಪ್ರಕೃತಿ

ಪ್ರಕೃತಿ ನೋಡಲು ಅದುವೇ ಅಂದ

ಅದರ ಸೊಬಗಿನಿಂದ ಸಿಗುವುದು ಪರಮಾನಂದ

ನೀ ಯಾಕೆ ಕೆಡಿಸುತ್ತೀಯಾ ಅದರ ಚೆಂದ?

ಕೆಡಿಸುವುದನ್ನು ಬಿಟ್ಟು ಸವಿ ಅದರ ಗಂಧ


***


೧೬. ಸಮಯ

ಕಾಯೋದಿಲ್ಲ ನೋಡೋದಿಲ್ಲ ಓಡುತ್ತದೆ ಸಮಯ

ಕಾಯದಿದ್ದರೆ ಮಾಡುವುದು ನಮ್ಮ ಜೀವನ ವ್ಯಯ

ಇದನ್ನು ಆದಿತುಕೊಂಡವನ ಜೀವನ ಆಗುವುದು ಸುಖಮಯ

ಅರಿತುಕೊಳ್ಳದವನ ಜೀವನ ಆಗುವುದು ನಿರ್ಣಯ


***


೧೭. ಬಾಲ್ಯ ವಿವಾಹ

ಏನೂ ಅರಿಯದ ಹುಡುಗಿಗೆ ಅರಿಶಿಣದ ಗಂಟು

ಇವಳಿಗೆ ಗೊತ್ತಾಗುವುದೇ ಸಂಸಾರದ ನಿಘಂಟು 

ಆದರೂ ಸಂಸಾರ ಮಾಡುವಳೂ ಎಂಬ ಉಟ್ಟಿಕೊಳ್ಳುವ ಸ್ಟೇಟಮೆಂಟು

ಆಮೇಲೆ ಸಂಸಾರದಲ್ಲಿ ಆಗುವುದ ಡೆವಲಪ್ಮೆಂಟು


***


೧೮. ರೇಖಾಗಣಿತದ ಡೇಟಾ

ರೇಖಾಗಣಿತದಲ್ಲಿ ಮುಖ್ಯವಾಗಿ ಬರೆಯಬೇಕು ಡೇಟಾ

ಈಗಿನ ಮಕ್ಕಳಿಗೆ ಅದನ್ನು ಬರೆಯುವುದೇ ದೊಡ್ಡ ಕಾಟ

ಡೇಟಾ ಬರೆಯದಿದ್ದರೂ ಅಂಕ ಬೇಕೆಂಬ ಹಠ

ಆದರೆ ನಿಲ್ಲುತ್ತಾ ಡೇಟಾ ಬರೆಯದ ಚಟಾ...?


***


೧೯. ಜ್ಞಾನ

ದೇಶದಲ್ಲಿ ತುಂಬಿತುಳುಕಬೇಕು ಜ್ಞಾನ

ಜ್ಞಾನದಿಂದಲೇ ಬೆಳಗುವುದು ವಿಜ್ಞಾನ

ವಿಜ್ಞಾನದಿಂದಲೇ ಹರಡುತ್ತಿದೆ ಸುಜ್ಞಾನ

ನಿಲ್ಲುವುದ ಈ ನೀಚ ಅನಿಸ್ಟ ಅಜ್ಞಾನ?


***


೨೦. ಸೊಸೆ

ಮನೆಯಲ್ಲಿದ್ದರೆ ಸೊಸೆ

ಆ ಗೃಹ ಯಾವಾಗಲೂ ಶೋಭಸೆ

ಪತಿ ಆಗ ತಿರುಗಿಸುವನು ಮೀಸೆ

ಸಂತೋಷದಿಂದಿರುವುದೇ ಅತ್ತೆ ಮಾವನ ಆಸೆ


***


೨೧. ನನಗಿದು ಕನ್ಫ್ಯೂಷನ್

ಮಾರ್ಕ್ಸ್ ಇಲ್ಲದಿದ್ದರೆ ಕೊಡಲೇಬೇಕು ಡೊನೇಷನ್

ವಯಸ್ಕರಿಗೆ ಬೇಕೇ ಬೇಕಲ್ಲ ಕಾನ್ಸೆಷನ್

ರಾಜಕಾರಣಿಗಳಲ್ಲಿ ಏಕೆ ಆಗುತ್ತಿದೆ ಮ್ಯುಟೇಷನ್

ನನಗಿದು ತುಂಬಾ ಕನ್ಫ್ಯೂಷನ್ ಕನ್ಫ್ಯೂಷನ್


***


೨೨. ಹೆಂಡತಿ

ಜೀವನದ ನಡೆನುಡಿಗಳನ್ನು ಅರ್ಥಮಾಡಿಕೊಳ್ಳುತ್ತ

ಗಂಡನ ಕಷ್ಟ ನೋವುಗಳನ್ನು ಹಣ್ಣಿನಂತೆ ಸವಿಯುತ್ತ

ಬಾಳಿನ ದೀಪವನ್ನು ಕತ್ತಲಿನಿಂದ ಬೆಳಕಿಗೆ ಸ್ಪರ್ಶಿಸುತ್ತಾ

ಗಂಡನ ಜೀವನದ ಸಂಗಾತಿಯಾಗಿರುವಳೆ ಹೆಂಡತಿ


***


೨೩. ನಾನು ಭಾರತೀಯ

ನಾನು ಭಾರತೀಯ ಅನ್ನೋದಕ್ಕೆ ಆಧಾರ್ ಕಾರ್ಡು

ಬಡವ ಶ್ರೀಮಂತ ಅನ್ನೋದಕ್ಕೆ ಬಿಪಿಎಲ್, ಎಪಿಎಲ್ ಕಾರ್ಡು

ಉದ್ಯಮಿ ಅನ್ನೋದಕ್ಕೆ ಜಾಬ್ ಕಾರ್ಡು

ನಾ ಮನುಷ್ಯ ಅನ್ನೋದಕ್ಕೆ ಯಾವ ಕಾರ್ಡು ?


***


೨೪. ಪ್ರೀತಿ 

ಪ್ರೀತಿಲಿ ಬಿದ್ದವನು ಹೇಳ್ಕೊತಾನೆ ಜಾಕಿ

ಪ್ರೀತಿ ಸಿಗಲಿಲ್ಲ ಅಂದರೆ ಅವನು ತಿರುಬೋಕಿ

ನೀನು ಬೇಡ ಅಂತ ಬರೆದು ಕೊಟ್ಟಳು ಸೈನ್ ಹಾಕಿ

ಇನ್ನೇನು ಉಳಿದಿದೆ ಅವನ ಜೀವನದಲ್ಲಿ ಬಾಕಿ?


***


೨೫. ಪ್ರೀತಿ ಒಂತರ ಗಿನತಿ

ಒಂದು ಎರಡು ಹುಡುಗಿ ಇಂದೇ ಹೊರಡು ಮೂರು ನಾಲ್ಕು

ಕಾಲು ಹಾಕು; ಐದು ಆರು ಪ್ರಿಯತಮನ ಹಾರ್ಟು ಶೇರು

ಏಳು ಎಂಟು ಯಾವಾಗ ನೋಡಿದರು ಮೀಟು

ಒಂಬತ್ತು ಹತ್ತು ನಿನ್ಮೇಲೇ ಪ್ಯಾರ್ ಆಯ್ತು


***


೨೬. ಅಂದು-ಇಂದು

ಅಂದಿನ ಅಮ್ಮ ಇಂದಿನ ಮಮ್ಮಿ

ಅಂದಿನ ಅಪ್ಪ ಇಂದಿನ ಡ್ಯಾಡಿ

ಅಂದಿನ ಸಾಧನೆ ಇಂದಿನ ಸಾಮಾನ್ಯ ಜ್ಞಾನ

ಅಂದಿನ ಸಂಸ್ಕೃತಿ ಸಂಸ್ಕಾರ ಇಂದು ಏನು ಏನು...?


***


೨೭. ಕಾಲೇಜಿನ ಮಸ್ತಿ

ಕಾಲೇಜಿನಲ್ಲಿ ಮಸ್ತಿ 

ಅದುವೇ ತುಂಬಾ ಜಾಸ್ತಿ 

ಆಮೇಲೆ ವಿದ್ಯಾರ್ಥಿಗಳ ನಡುವೆ ಕುಸ್ತಿಯೋ ಕುಸ್ತಿ 

ಮುರಿಯಲೇ ಬೇಕಲ್ಲ ಮಸ್ತಿ ಮಾಡಿದವರ ಅಸ್ತಿ


***


೨೮. ಹೆಣ್ಣು

ಹೆಣ್ಣಿಗೆ ತನ್ನ ನಾಚಿಕೆಯೇ ಆಭರಣ

ಅವಳ ಮುಗ್ದತೆಯೇ ಅವಳಿಗೆ ದೊಡ್ಡ ಚಿನ್ನ

ಬಿಡಲಾರಳು ಇವಳು ತನ್ನ ದೇಶದ ಸಂಸ್ಕಾರ,ಸಂಸ್ಕೃತಿ

ಇವಳಿಗೆ ತನ್ನ ಅಂದ, ಚಂದ, ಸೌಂದರ್ಯವೇ ಲಕ್ಷಣ


***


೨೯. ಮೈಸೂರು

ಮಹಿಷಾಸುರ ಸಂಹಾರವಾದ ಊರಿದು

ಕಲೆಗಳಿಗೆ ಸಂಸ್ಕೃತಿಗೆ ತವರೂರ ಬೀಡಿದು

ರಾಜಾದಿ ರಾಜರು ಒಡೆಯರು ಆಳಿದ ಊರಿದು

ಕರ್ನಾಟಕದಲ್ಲಿ ಅರಮನೆ ನಗರಿ ಎಂದು ಪ್ರಸಿದ್ದವಾದ ಮೈಸೂರು ನಗರವಿದು


***


೩೦. ಗಾಂಧಿ

ಗಾಂಧಿ ಒಬ್ಬರು ಅಹಿಂಸಾವಾದಿ

ಮಾಡಿದರು ಬ್ರಿಟಿಷರನ್ನ ಬ್ರಾಂದಿ

ಇವರು ಬಂದ ಮೇಲೆ ಆಂಗ್ಲರು ಚಿಂದಿ ಚಿಂದಿ

ಕೊನೆಗೂ ಗೂಡಸೇಯಿಂದಾದರೂ ಬೂದಿ


***


೩೧. ಆಸೆ

ಯಾರಿಗೆ ಇರೋದಿಲ್ಲ ತಾನೇ ಆಸೆ

ನಮ್ಮ ಜನರಿಗೆ ತುಂಬಿ ತುಳುಕುತಿದೆ ಅತಿ ಅಸೆ

ಸೋತರೂ ಅತಿ ಆಸೆ, ಬರಲೇಬೇಕಲ್ಲ ದುರಾಸೆ

ಅಸೆ ಉತ್ತಮ ಸ್ಥಾನ ಗೈದರೆ ಸಿಗುವುದು ಪ್ರಶಂಸೆ


***


೩೨. ದೇವಸ್ಥಾನ

ಒಳ್ಳೆಯದಾಗಬೇಕೆಂದರೆ ಮಾಡಿಸಬೇಕು ಅರ್ಚನೆ

ಕೊಡಲೇಬೇಕಲ್ಲ ಪೂಜಾರಿಗೆ ದಕ್ಷಿಣೆ

ದೇವಸ್ಥಾನಕ್ಕೆ ಹೋದರೆ, ಹಾಕದೆ ಬರುತ್ತೀರಾ ಪ್ರದಕ್ಷಿಣೆ

ನಿಮಗೆ ಆಶೀರ್ವದಿಸಿ ದೇವರು ನೀಡುವನು ರಕ್ಷಣೆ


***


೩೩. ಬ್ರಿಲಿಯಂಟ್ಸ್ಗಳು

ಔಟ್ ಆಫ್ ಔಟ್ ತೆಗೆದು ಓದುವರೆ ಪಂಟರು

ಇವರ ಮುಂದೆ ನಾವು ಯಾವಾಗಲೂ ಕುಂಟರು

ಅಕ್ಕಿ ರಾಗಿ ಬೆಳೆಯುವರೆಲ್ಲ ಪೆದ್ದರು

ಇದನ್ನು ತಿನ್ತಾರೆ ಪಂಟರು, ಅವರಾಗಲ್ವಾ ಪೆದ್ದರು? ಯೋಚಿಸು ಗುರು.


***


೩೪. ರೈತ

ನಿನಗೆ ಬರಲ್ಲ ಅಂದ್ರು ಎ,ಬಿ,ಸಿ,ಡಿ

ನೀನೇ ಸರ್ಕಾರಕ್ಕೆ ಕೊಟ್ಟೆ ಸಬ್ಸಿಡಿ

ನಿನ್ನ ಬೆಳೆಯಲ್ಲಿ ಕೊಡಲಿಲ್ಲ ಅಂದ್ರೆ ಒಂದು ಹಿಡಿ

ರೈತ ನಿಲ್ಲದ ದೇಶದ ಆಸೆ ಬಿಟ್ಟು ಬಿಡಿ


***


೩೫. ಯಶಸ್ಸು

ಉತ್ತಮ ಕೆಲಸ ಮಾಡಿದರೆ ಸಿಗುವುದು ಯಶಸ್ಸು

ಆವಾಗಲೇ ಆ ಕೆಲಸ ಫುಲ್ ಸಕ್ಸಸ್ಸು

ಕೆಲಸ ಕೆಟ್ಟರೆ ಆಗುವುದು ಅಪಯಶಸ್ಸು

ಕೆಲಸದಲ್ಲಿ ಯಶಸ್ ಕಂಡಾಗ ಜೀವನದಲ್ಲಿ ಚಿಮ್ಮುವುದು ಉಮ್ಮಸ್ಸು


***


೩೬. ಗಿರವಿ ಅಂಗಡಿ ಗೀರ

ಗಿರವಿ ಅಂಗಡಿ ಗೀರ

ನೀ ಯಾಕೆ ಮುಟ್ಟುಸ್ತೀಯ ಜನರಿಗೆ ಬಡತನದ ಖಾರ

ಒಂದ್ ಕಿಟ ಅವರೋದ್ರೇ ಬಾನೆತ್ತರ

ಅವರಿಂದ ನೀನಾಗುವೆ ಸಂಹಾರ


***


೩೭. ವಿದ್ಯೆ

ವಿದ್ಯಾದಾನವೇ ಮಹಾದಾನ ಅಂದಾಗಿತ್ತು

ಧನಮ್ ಯಚ್ಛೇನ ವಿದ್ಯಮ್ ಇಂದಾಗಿದೆ

ಆದರೆ ಇದನ್ನು ಮಾತ್ರ ಮರೆಯಬೇಡಿ

ದುಡ್ಡೇ ದೊಡಪ್ಪ ವಿದ್ಯೆ ಅವರಪ್ಪ


***


೩೮. ಕೊಡಗಿನ ಹಸಿರು

ಪ್ರಕೃತಿಯ ಪ್ರಯೋಗಾಲಯ ಕೊಡಗು

ಮೂಡಿಸಿದೆ ಎಲ್ಲೆಲೂ ಹಸಿರಿನ ಬೆರಗು

ಎಲ್ಲಿ ಕೇಳಿದರೂ ಹಕ್ಕಿಯ ಕಲರವದ ಕೂಗು

ಹೋಗಲಾಡಿಸುವುದು ಮನದ ಕೊರಗು


***


೩೯. ಕುಂಕುಮ

ಹಣೆಯಲಿ ಯಾವಾಗಲೂ ನಗುತ್ತಿರಬೇಕು ಕುಂಕುಮ

ನೋಡಿದವರ ಮನಸ್ಸಿಗೆ ಸಿಗುವುದು ಸಂಭ್ರಮ

ಈಗ ಹಣೆಯಲ್ಲಿ ಕುಂಕುಮ ಇಡುವುದಕ್ಕೆ ಬರ

ಇಡದಿದ್ದವರಿಗೆ ಆ ದಿನ ತಪ್ಪಿದಲ್ಲ ಗ್ರಹಚಾರ


***


೪೦. ಸಂಸ್ಕೃತ ಭಾರತಿ 

ದೇವ ಭಾಷೆಗೆ ತವರೂರಿದು ಸಂಸ್ಕೃತ ಭಾರತಿ

ಮಾಡುವೆನು ನಿನಗೆ ಜೇoಕಾರದ ಆರತಿ

ಅದೆಲ್ಲಿ ಹುಟ್ಟಿತು ಆ ನಿನ್ನ ಸಂತತಿ

ಮೈನವಿರೇಳುತ್ತದೆ ನೋಡಿ ಆ ನಿನ್ನ ಪ್ರಗತಿ


***


೪೧. Prime  v/s Cheif 

ಮೋದಿಯವರು ಮಾಡಿದರು ಮನ್ ಕೀ ಬಾತ್

ಅದು ಆಕಾಶವಾಣಿ ಕೆ ಸಾಥ್

ಸಿದ್ದುರವರು ತಿಂದರು ಖಾರ ಬಾತ್

ಆಮೇಲೆ ಹೇಳಿದರು ಕ್ಯಾ ಬಾತ್...ಕ್ಯಾ ಬಾತ್...


***


೪೨. ರಂಗಾಯಣ

ರಂಗು ರಂಗಿನ ರಂಗಾಯಣ

ಅಬ್ಬಾ ಏನು ಆ ನಾಟಕದ ದಿಬ್ಬಣ

ಮಾಡಿತು ನನ್ನ ನವರಸಗಳ ಸಮ್ಮಿಲನ

ನೀ ಮಿಡಿಸುವೆ ನನ್ನ ಒಳಮನ


***


೪೩. ಕವಿ ಆದಾಗ ನಾನು

ಸ್ಮೈಲ್ ಏಕೊ ತುಂಬಾ ಹೆಚ್ಚುವರಿ

Graind ಆಗಿದೆ ನನ್ನ ಮೆಮೊರಿ

ಲೈನ್ಸ್ ಅಲ್ಲಿ ಏನೋ ಸರಾಸರಿ

ವಿಥೌಟ್ ರೀಸನ್ ಸುಮ್ಮನೆ


***


೪೪. ಕೋಗಿಲೆ

ವಸಂತ ಕಾಲದಲ್ಲಿ ಮಾಮರದ ಮೇಲೆ ಕುಳಿತು ಆಡುವೆ

ನಮ್ಮ ನೋವುಗಳನ್ನು ಪಕ್ಕ ಇಟ್ಟು ನಿನ್ನ ಹಾಡು ಕೇಳುವೆ

ನಾದ ಸಾಮರಸ್ಯವನ್ನು ಮಣಿಗಳ ಹಾಗೆ ಜೋಡಿಸುವೆ

ನಮ್ಮ ಎದೆಯ ತಾಳವನ್ನು ನೀ ಮಿಡಿಸುವೆ... ಓ ಕೋಗಿಲೆ


***


೪೫. ಪ್ರೀತಿಯೋ ? ತ್ಯಾಗವೂ

ಪ್ರೀತಿ ಮಧುರ

ತ್ಯಾಗ ಅಮರ

ತ್ಯಾಗ ಮಡಿದ ಮೇಲೆ ಅನುಭವಿಸುವ ಕಷ್ಟ ತರ ತರ

ಕಷ್ಟ ಸಹಿಸಲಾರದವನು ಹರಹರ


***


೪೬. ಸೋ ಬ್ಯಾಡು...

ನಮ್ಮ ಹುಡುಗಿ ಮಾತಾಡಿಸದೆ ಇದ್ದರೆ ಆಗುತ್ತೆ ಸ್ಯಾಡು

ಈ ನೋವು ಅನ್ನೋದನ್ನ ಯಾರು ಮೇಡು

ಇದೆಲ್ಲ ಗೊತ್ತಿರುವುದು ಓನ್ಲಿ ಫಾರ್ ಗಾಡು

ಇಲ್ಲಿ ಹುಡುಗರ ಪರಿಸ್ಥಿತಿಯಂತು ಸೋ ಬ್ಯಾಡು...ಸೋ ಬ್ಯಾಡು


***


೪೭. ಮಡಿಕೇರಿ

ಮಂಜಿನ ಮಧ್ಯೆ ಕಾಣುವ ಊರು ಮಡಿಕೇರಿ

ನಾನ್ನೊಮ್ಮೆ ಮಾಡಿದೆ ಆ ಊರಿಗೆ ಸವಾರಿ

ನನ್ನ ಮನಸ್ಸು ಹೋಯ್ತು ಆ ಮಳೆಗೆ ಹಾರಿ

ಇವನ್ನೆಲ್ಲ ನೋಡೋಕೆ ನೀವು ಒಮ್ಮೆ ಹೋಗ್ರಿ


***


೪೮. ಕವಿ

ರವಿಯನ್ನು ಕೆಂಪಗೆ ಕಾಣುವನು ಕವಿ

ಕವಿಯ ಪದ ಕೇಳಿದರೆ ಇಂಪಾಗುವುದು ಕಿವಿ

ಸಾಹಿತ್ಯದ ರಸವನ್ನು ಸಹಿದವನ ಜೀವನ ಸಿಹಿ

ಸವಿಲಾರದವನ ಜೀವ ಯಾವಾಗಲೂ ಕಹಿ


***


೪೯. ಸೌಂದರ್ಯ

ಮನದ ಮನತಣಿಸಿ

ನವರಸವ ಹೊರಹಾಕುವುದು ಸೌಂದರ್ಯ

ಮನಸ್ಸು ಮುರಿದು

ರಸವ ಸುರಿಸಲೇ ನೀ ಅರ್ಹ 


***


೫೦. ನಮನ

ಇದೋ ನನ್ನ ರಾಶಿ ಪದಗಳ ಸಮ್ಮಿಲನ

ನಿಮ್ಮ ಮುಂದೆ ಇಟ್ಟಿದ್ದೇನೆ ನನ್ನ ಒಂದು ಪುಟ್ಟ ಕವನ

ಎಲ್ಲರೂ ಪ್ರೀತಿಯಿಂದ ಹರಸಿ ಈ ಯುವ ಕವಿಯನ್ನ 

ನನ್ನ ಪ್ರೀತಿಯ ಕನ್ನಡಿಗರಿಗೆಲ್ಲ ಕೋಟಿ ಕೋಟಿ ನಮನ


***


ಮುಂದಿನ ಅಂಕಣ - ಮನಸಿನಾಳ

ನಾ ನಾಕುವೆ ಪದಗಳ ತಾಳ

ಪದಗಳು ತುಂಬಾ ಸರಳ

ಕೇಳಿದರೆ ನಿಮ್ಮ ಮನಸ್ಸು ನಿರಾಳ

ಇಲ್ಲಿ ಬರುವ ಪದಗಳೆಲ್ಲಾ ನನ್ನ ಮನಸಿನಾಳ

Comments

Popular posts from this blog

Ageing is not an end

Thank You

I Love You