Kannada - ಹಾಗೆ ಬರೆದದ್ದು
ಪ್ರೀತಿನ ಸುಳ್ಳು ಅಂತ ಹೇಳ್ತಾರೆ.
ಪ್ರೀತಿನ ನಿಜ ಅಂತ ಹೇಳ್ತಾರೆ.
ನಿಜವಾದ ಪ್ರೀತಿ ಸುಳ್ಳಲ್ಲ.
ಸುಳ್ಳಿನ ಪ್ರೀತಿ ನಿಜವಲ್ಲ.
ಆದರೆ ಈ ಪ್ರೀತಿನೆ ಹಾಗೆ,
ನಿಜವಾಗಿರೋದನ್ನ ಸುಳ್ಳು ಅಂತ ತೋರಿಸುತ್ತೆ.
ಸುಳ್ಳಾಗಿರೋದನ್ನ ನಿಜ ಅಂತ ತೋರಿಸುತ್ತೆ.
***
ಪ್ರೇರಿತ ಗೊಂಡೆಯ
ನನ್ನ ಪದ್ಯಗಳ ಓದಿ.
ಓದುಗರ ಮನಸ್ಸು ಗೆದ್ದರೆ
ಅದೇ ನನಗೆ ನೆಮ್ಮದಿ.
***
ನೊಂದ ಮನಕ್ಕೆ
ನೀ ಅಚ್ಚದೆ ಹೋದೆ ಮುಲಾಮು?
ಆದರೂ ಹೋಗುವ
ಮುನ್ನ ನೀ ಹೇಳಬಹುದಿತ್ತಲ್ಟಾ ಸಲಾಮು.
***
ಈಗೆ ಬಂದು ಹಾಗೆ
ಹೋದಳು ನನ್ನಾಕೆ.
ಯಾಕೋ ಹೇಳಲಿಲ್ಲ
ನನಗೆ ಅವಳು ಓಕೆ.
***
ಪ್ರೀತಿ ಇಲ್ಲದ ಊರಿನಲ್ಲಿ
ನಿನ್ನ ಹುಡುಕಿ ಬಂದವನು ನಾನು.
ನಿನ್ನ ಸೆರಗ ಸೋಕಿಸಿ
ಮೆಲ್ಲಗೆ ಹೃದಯ ಕದ್ದವಳು ನೀನು.
***
ಈ ಹೃದಯಕ್ಕೆ
ಅವಳು ಬರೆದಳು ಪತ್ರ.
ಆದರೆ ಹೇಳದೆ
ಹೋದಳು ಅವಳ ಪಾತ್ರ.
***
ಮನ ಕುಲುಕಿತು ಅವಳ ಮೊಗವ ನೋಡಿ,
ಮನದಲ್ಲಿ ಮಾಡಿ ಹೋದಳು ಮೋಡಿ.
***
ಮಾರಾಟಕ್ಕಿದೆ ಈ ನನ್ನ ಹೃದಯ.
ಏಕೆಂದರೆ ಈ ಜೀವನದಲ್ಲಿ ಅವಳೇ ಮಾಯ.
ತೆರೆಯಲು ಬಾ ನೀನೂಂದು ಹೊಸ ಅಧ್ಯಾಯ.
ನೀ ಜೊತೆಗಿದ್ದರೆ ತಿಳಿಯೋದಿಲ್ಲ
ಹೇಗೆ ಕಳೆಯುತ್ತೆ ಸಮಯ.
***
ಕಾದು ಕುಳಿತಿರುವೆ
ನಾ ನನ್ನ ನಲ್ಲೆಗೆ.
ಮೆಲುಕು ಹಾಕುತ್ತಾ
ಅವಳ ಕಿರು ನಗೆ.
ಕೈಯಲ್ಲಿ ಗುಲಾಬಿಯ ಹಿಡಿದು,
ಮನದಲ್ಲಿ ಆಕೆಯ ನೆನೆದು
***
ನನ್ನ ಕನಸೊಂದು ಹೇಳುವೆ
ಕೇಳು ನೀನು
ನನ್ನ ಕನಸೇ ನೀನಾದರೇ
ಹೇಳುವುದು ಇನ್ನೇನು
***
ಕನ್ನಡಿಗನ್ನೆಂಬ ಗರ್ವ ಬೇಡ
ಕನ್ನಡದ ಕಂಪನ್ನು ಪಸರಿಸು
ಕನ್ನಡ ಬಾರದವರಿಗೆ ಹಿಯಾಳಿಸಬೇಡ
ಕನ್ನಡವನ್ನು ಕಲಿಸು
***
ನಡೆಯುವಾಗ ಹಿಂತಿರುಗಿ ನೋಡಬೇಡ
ನಿನ್ನ ಅಂದಕ್ಕೆ ನಾನು ಸೋತುವೋಗುವೆ
ನಗುವಾಗ ನೀನು ಮುಗುಳ್ನಗಬೇಡ
ನಿನ್ನ ನಗುವಿಗೆ ಮೊದಲೇ ಅಭಿಮಾನಿ ಆಗಿರುವೆ
ನೋಡುತ ನೋಡುತ ಕಣ್ಣಲ್ಲೇ ಕೊಲ್ಲಬೇಡ
ದೃಷ್ಟಿ ಯುದ್ಧದಲ್ಲಿ ನಾನು ಮೊದಲೇ ಸೋತಿರುವೆ
ಮನಕ್ಕೆ ಬಂದಂತೆ ಪದಗಳ ಬರೆದಿರುವೆ
ಕೊನೆವರೆಗೂ ನಿನ್ನ ನೆರಳು ನಾನಾಗಿರುವೆ
***
Comments
Post a Comment